Prasad Abbayya
ಜನತೆಯ ಅಭಿವೃದ್ಧಿಯನ್ನೇ ಉಸಿರಾಗಿಸಿಕೊಂಡಿರುವ ಶಾಸಕರು ರಾಜಕಾರಣವೆನ್ನುವುದು ಜನರ ಸೇವೆಗೆ ಸಿಕ್ಕ ಅವಕಾಶವೆನ್ನುವುದನ್ನು ಎರಡೂ ಅವಧಿಯಲ್ಲಿ ತೋರಿಸಿಕೊಟ್ಟ ನಿಜವಾದ ಜನನಾಯಕರು ಜನತೆಯ ಸೇವಕರು ಶ್ರೀ ಪ್ರಸಾದ ಅಬ್ಬಯ್ಯ ಅವರು, ರಾಜಕಾರಣಿಗಳಲ್ಲಿ ಎರಡು ಪ್ರಕಾರದ ರಾಜಕಾರಣಿಗಳನ್ನು ಜಗದ್ವಿಖ್ಯಾತ ಚಿಂತಕ ಜಾರ್ಜ್ ಬಾರ್ಡ್ ಶಾ ಬಣ್ಣನೆ ಮಾಡುತ್ತಾರೆ. ಮುಂದಿನ ಚುನಾವಣೆಯ ಮೇಲೆ ಕಣ್ಣಿರಿಸಿದವನು ಕೇವಲ ರಾಜಕಾರಣಿಯಾದರೆ (polotician), ಮುಂದಿನ ಪೀಳಿಗೆಯ ಅಭಿವೃದ್ಧಿಯ ಮೇಲೆ ಕಣ್ಣಿರಿಸಿದವನು ರಾಜತಾಂತ್ರಿಕ (Statesman) ಎನ್ನುವ ಮಾತು ಇಂತಹ ನಿಸ್ವಾರ್ಥ ರಾಜಕಾರಣಿಗಳನ್ನೇ ನೋಡಿ ಮಾಡಿರಬೇಕು. ಸಮಾಜ ಸೇವೆ ಮಾಡುವುದಕ್ಕೆ ದೊರಕಿದ ಒಂದು ಅವಕಾಶ ಎಂದು ತಿಳಿದ ಪ್ರಾಜ್ಞರು ಅವರು, ಬಡವರ ಬಂಧು, ದೀನದಲಿತರ ಆಶಾಕಿರಣ, ಯುವಕರ ಕಣ್ಮಣಿ, ಹುಬ್ಬಳ್ಳಿಯ ಸೇವಕ ಎಂದೇ ಖ್ಯಾತರಾದ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಶಾಸಕರು ಪ್ರಸಾದ್ ಅಬ್ಬಯ್ಯ..
ಹುಬ್ಬಳ್ಳಿ ಶಹರ ಕ್ಷೇತ್ರದ ಸೌಭಾಗ್ಯ ಇವರು ಈ ಎರಡು ಅವಧಿಯಲ್ಲಿ ಮಾಡಿದ ಕೆಲಸಗಳನ್ನು ಪಟ್ಟಿ ಮಾಡಲು ಸಾವಿರ ಪುಟಗಳೇ ಬೇಕು, ಒಬ್ಬ ರಾಜಕಾರಣಿ ಜನತೆಯ ನಿಜವಾದ ಅಭಿವೃದ್ಧಿ ಅಂದರೆ ಆತ ಪ್ರಥಮತಃ ಸಾಮಾನ್ಯ ಜನರಿಗೆ ಕುಡಿಯುವ ನೀರು, ಅನ್ನ, ಆರೋಗ್ಯ ಮತ್ತು ಅಕ್ಷರ ಇವುಗಳು ಸಿಗುವಂತೆ ಮಾಡಬೇಕು, ಜನರು ಗೌರವಯುತ ಜೀವನ ಸಾಗಿಸುವಂತೆ ಮಾಡಬೇಕು. ಈ ದಿಶೆಯಲ್ಲಿ ಮೊದಲು ಸೂರು ಕೊಡುವತ್ತ ಕಾರ್ಯಪ್ರವೃತ್ತರಾದ ಶಾಸಕರು ಕಳೆದ ಹತ್ತು ವರ್ಷಗಳಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ದಾಖಲೆಯ ಒಟ್ಟು 2668 ಮನೆಗಳನ್ನು ನಿರ್ಮಿಸಲು ಮುಂದಾಗಿದ್ದಾರೆ. ಮಂಟೂರು ರಸ್ತೆಯಲ್ಲಿ ಮೊದಲ ಹಂತದ 1300 ಮನೆಗಳ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಹಂಚಿಕೆಗೆ ಸಿದ್ಧವಾಗಿವೆ.
View Profile